User talk:Vikassy
- [View source↑]
- [History↑]
ಹಾಯ್ ವಿಕಾಸ್,
VisualEdior (ದೃಶ್ಯ ಸಂಪಾದಕ)ವನ್ನು ಕನ್ನಡಕ್ಕೆ ಕನ್ನಡೀಕರಿಸುತ್ತಿರುವುದನ್ನು ಕಂಡು ಖುಷಿಯಾಯಿತು. ನನ್ನ ಒಂದೆರಡು ಪ್ರತಿಕ್ರಿಯೆಗಳು ಹೀಗಿವೆ. ಋಣಾತ್ಮಕವಾಗಿ ಇವುಗಳನ್ನು ತೆಗೆದುಕೊಳ್ಳಬೇಕೆಂದು ಕೋರಿಕೆ. ನಿಮ್ಮ ಅನುವಾದಗಳಲ್ಲಿ ವ್ಯಾಕರಣ ದೋಷಗಳು ಅನೇಕ. ಇವುಗಳು ಕಂಡುಬಂದಲ್ಲಿ, ಕನ್ನಡ ವಿಕಿಪೀಡಿಯದ ಸುತ್ತಲಿರುವ ನಾವು ಕೆಲವರು ಅವುಗಳನ್ನು ತಿದ್ದಿರುತ್ತೇವೆ. ಅವುಗಳನ್ನು ಕಲಿಕೆಗೆ ಬಳಸಿಕೊಳ್ಳಿ. ಜೊತೆಗೆ ಈಗಾಗಲೇ ಇರುವ ಅನುವಾದಗಳ ಸಲಹೆಗಳನ್ನು ಬಳಸುವಾಗ, ಸಾಮಾನ್ಯ ಕನ್ನಡಿಗನು ಅದನ್ನು ಓದಿದಾಗ ಅರ್ಥ ಮಾಡಿಕೊಳ್ಳಲಾಗುತ್ತದೆಯೇ ಯೋಚಿಸಿ ನಂತರ ಆ ಅನುವಾದಗಳನ್ನು ಬಳಸಿ. ನೀವು ಮಾಡುವ ಅನುವಾದಗಳಿಗೂ ಇದು ಅನ್ವಯವಾಗಲಿ. ಮತ್ತೊಂದು ಮುಖ್ಯ ವಿಷಯ ಅನುಸ್ವಾರಗಳಿಗೆ ಸಂಬಂಧಿಸಿದ್ದು. ಂ ಬದಲು ಅನೇಕ ಕಡೆ ನೀವು ೦ (ಸೊನ್ನೆ) ಬಳಸಿದ್ದೀರಿ. ಸೊನ್ನೆ ಬಳಸಲು ಲಿಪ್ಯಂತರಣದ ಕೀಬೋರ್ಡ್ ನಲ್ಲಿ Shift + M ಬಳಸಿದರೆ ಅನುಸ್ವಾರ ಮೂಡುತ್ತದೆ. ಕನ್ನಡ ವಿಕಿಪೀಡಿಯದ ಅರಳೀಕಟ್ಟೆಯಲ್ಲಿ ನೀವು ಸಮುದಾಯದ ಸಹಾಯವನ್ನೂ ಕೋರಬಹುದು. ನಿಮ್ಮ ಅನುವಾದದ ಕೆಲಸ ಉತ್ತಮಗೊಂಡು ಮತ್ತಷ್ಟು ಮುಂದುವರೆಯಲಿ. ಧನ್ಯವಾದಗಳೊಂದಿಗೆ, ಶಿವು
Thanks for your translations! Please join our mw:VisualEditor/Translathon?